ತಾಜಾ ಸುದ್ದಿಸುದ್ದಿಕ್ರೀಡೆವೀಡಿಯೋಮನರಂಜನೆಜೀವನಶೈಲಿವೆಬ್‌ಸ್ಟೋರೀಸ್ಜಿಲ್ಲಾ ಸುದ್ದಿತಂತ್ರಜ್ಞಾನವಾಣಿಜ್ಯಜ್ಯೋತಿಷ್ಯಗ್ಯಾಲರಿಆಟೋ ಸುದ್ದಿಉದ್ಯೋಗKEA 2025

Jio Unlimited Offer 2025: ಐಪಿಎಲ್ ಮುಗಿದ್ರೂ ಜಿಯೋ ಗ್ರಾಹಕರು ಫುಲ್ ಖುಷಿ, ಇನ್ನೂ ರದ್ದಾಗಿಲ್ಲ ಜಿಯೋ ಈ ಆಫರ್

Roopa Hegde | Updated : Jun 05 2025, 11:33 AM IST

ಐಪಿಎಲ್ ಮುಗಿದಿದೆ. ಆಫರ್ ಕೂಡ ಮುಗಿಯುತ್ತೆ ಅಂದ್ಕೊಂಡಿದ್ದ ಗ್ರಾಹಕರಿಗೆ ಅಚ್ಚರಿಯಾಗಿದೆ. ಜಿಯೋ ಇನ್ನೂ ತನ್ನ ಉಚಿತ ಸಬ್ ಸ್ಕ್ರೈಬ್ ಸೇವೆ ಮುಂದುವರೆಸಿದೆ.

ಐಪಿಎಲ್ (IPL) ಮುಗಿದ್ರೂ ಜಿಯೋ ಬಳಕೆದಾರರು ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಜಿಯೋ ಅನ್ಲಿಮಿಟೆಡ್ ಆಫರ್ (Jio Unlimited Offer). ಜಿಯೋ ಈ ವರ್ಷ ಜಿಯೋ ಅನ್ ಲಿಮಿಟೆಡ್ ಆಫರ್ 2025 ಆರಂಭಿಸಿತ್ತು. ಮಾರ್ಚ್ 17, 2025ರಿಂದಲೇ ಈ ಆಫರ್ ಗ್ರಾಹಕರಿಗೆ ಲಭ್ಯವಾಗಿತ್ತು. ಈ ಆಫರ್ ಅಡಿ, ಕಂಪನಿ ಕೆಲ ಪ್ಲಾನ್ ಜೊತೆ ಜಿಯೋ ಹಾಟ್ಸ್ಟಾರ್ ಸಬ್ಸ್ಕ್ರೈಬ್ ನೀಡ್ತಾ ಇತ್ತು. ಇದಕ್ಕೆ ಗ್ರಾಹಕರು ಪ್ರತ್ಯೇಕವಾಗಿ ಹಣ ಪಾವತಿ ಮಾಡ್ಬೇಕಾಗಿರಲಿಲ್ಲ. ಉಚಿತವಾಗಿ ಜಿಯೋ ಹಾಟ್ ಸ್ಟಾರ್ ಸಬ್ಸ್ಕ್ರೈಬ್ (Hotstar Subscribe) ಲಭ್ಯವಿದೆ. ಐಪಿಎಲ್ ಗಮನದಲ್ಲಿಟ್ಟುಕೊಂಡು ಕಂಪನಿ ಈ ಆಫರ್ ಲಾಂಚ್ ಮಾಡಿತ್ತಾದ್ರೂ ಈಗ್ಲೂ ಗ್ರಾಹಕರಿಗೆ ಈ ಯೋಜನೆ ಸಿಗ್ತಿದೆ.

ಎಲ್ಲಿಯವರೆಗೆ ಸಿಗಲಿದೆ ಈ ಆಫರ್? : ಜೂನ್ 3ರಂದು ಐಪಿಎಲ್ ಫೈನಲ್ ಪಂದ್ಯ ನಡೆದಿದ್ದು, ಐಪಿಎಲ್ 2025 ಆರ್ ಸಿಬಿ ಗೆಲುವಿನೊಂದಿಗೆ ಮುಕ್ತಾಯವಾಗಿದೆ. ಆದ್ರೆ ಜಿಯೋ ಮಾತ್ರ ಈವರೆಗೂ ಈ ಆಫರ್ ಎಲ್ಲಿಯವರೆಗೆ ಮುಂದುವರೆಯಲಿದೆ ಎಂಬುದನ್ನು ಹೇಳಿಲ್ಲ. ಸಾಮಾನ್ಯವಾಗಿ ಜಿಯೋ ತನ್ನ ಆಫರ್ ಗಳಿಗೆ ಡೇಟ್ ಫಿಕ್ಸ್ ಮಾಡಿರುತ್ತೆ. ಆದ್ರೆ ಈ ಬಾರಿ ಕಂಪನಿ ಈ ಆಫರ್ ಗೆ ಯಾವುದೆ ಅಂತಿಮ ದಿನವನ್ನು ಘೋಷಣೆ ಮಾಡಿಲ್ಲ. ಕಂಪನಿ ಈ ಆಫರ್ ಬಂದ್ ಮಾಡೋವರೆಗೂ ಗ್ರಾಹಕರಿಗೆ ಚಿಂತೆ ಇಲ್ಲ. ಉಚಿತ ಸಬ್ಸ್ಕ್ರೈಬ್ ಸೌಲಭ್ಯ ಲಭ್ಯವಿದ್ದು, ನೀವು ಜಿಯೋ ಹಾಟ್ ಸ್ಟಾರ್ ನೋಡ್ಬಹುದು. ಆದ್ರೆ ಯಾವಾಗ ಬೇಕಾದ್ರೂ ಕಂಪನಿ ಇದನ್ನು ರಿಮೋ ಮಾಡ್ಬಹುದು ಅನ್ನೋದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಉಚಿತವಾಗಿ ಸಿಕ್ತಿತ್ತು ಜಿಯೋ ಹಾಟ್ಸ್ಟಾರ್ : ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಎರಡರಲ್ಲೂ ಈ ಆಫರ್ ಲಭ್ಯವಿದೆ. ಈ ಆಫರ್ ಅಡಿಯಲ್ಲಿ 299 ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಿದ್ರೆ ನಿಮಗೆ ಜಿಯೋ ಹಾಟ್ ಸ್ಟಾರ್ ಉಚಿತವಾಗಿ ಸಿಗಲಿದೆ. ಕಂಪನಿ ಮೂರು ತಿಂಗಳು ಅಂದ್ರೆ 90 ದಿನಗಳ ವ್ಯಾಲಿಡಿಟಿಗಾಗಿ ಸಬ್ಸ್ಕ್ರಿಪಕ್ಷನ್ ಉಚಿತವಾಗಿ ನೀಡ್ತಿದೆ. ಜಿಯೋ ಅನ್ ಲಿಮಿಟೆಡ್ ಆಫರ್ 2025 ಅಡಿಯಲ್ಲಿ ಕಂಪನಿ 50 ದಿನಗಳ ಉಚಿತ ಸರ್ವಿಸ್ ನೀಡ್ತಿದೆ. ಅಷ್ಟೆ ಅಲ್ಲ ಈ ಆಫರ್ ಜಿಯೋ ಫೈಬರ್ ಹಾಗೂ ಜಿಯೋ ಏರ್ ಫೈಬರ್ ಎರಡರ ಟ್ರಯಲ್ ಆಗಿ ಸಿಗ್ತಿದೆ.

ಜಿಯೋ 349 ರೂ. ಪ್ಲಾನ್ ನಲ್ಲೂ ಲಭ್ಯ : ಜಿಯೋದ 349 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲೂಗ್ರಾಹಕರು ಉಚಿತ ಹಾಟ್ ಸ್ಟಾರ್ ಸೌಲBಯ ಪಡೆಯುತ್ತಿದ್ದಾರೆ. 349 ಯೋಜನೆ 28 ದಿನಗಳ ವ್ಯಾಲಿಟಿಡಿ ಹೊಂದಿದೆ. ಪ್ರತಿ ದಿನ 2 ಜಿಬಿ ಡೇಟಾ ಗ್ರಾಹಕರಿಗೆ ಸಿಗ್ತಿದೆ. 100 ಎಸ್ ಎಂಎಸ್ ಜೊತೆ ಉಚಿತ ಕರೆ ಕೂಡ ಲಭ್ಯವಿದೆ.

899 ರೂಪಾಯಿ ಪ್ಲಾನ್ : ಕಂಪನಿ 899 ರೂಪಾಯಿ ಪ್ಲಾನ್ ನಲ್ಲೂ ಜಿಯೋ ಹಾಟ್ ಸ್ಟಾರ್ ಉಚಿತವಾಗಿ ನೀಡ್ತಿದೆ. ಇದು 90 ದಿನಗಳ ವ್ಯಾಲಿಟಿಡಿ ಹೊಂದಿದ್ದು, ಪ್ರತಿ ದಿನ 2 ಜಿಬಿ ಡೇಟಾ ಜೊತೆ 20 ಜಿಬಿ ಪ್ರತ್ಯೇಕ ಡೇಟಾ ಸಿಗ್ತಿದೆ. 100 ಎಸ್ ಎಂಎಸ್ ಹಾಗೂ ಉಚಿತ ಕಾಲಿಂಗ್ ಕೂಡ ಸಿಗ್ತಿದೆ.

ಮಾಹಿತಿಯೊಂದರ ಪ್ರಕಾರ, ಐಪಿಎಲ್ ಸಂದರ್ಭದಲ್ಲಿ ಜಿಯೋ ಹಾಟ್ ಸ್ಟಾರ್ ಸಬ್ಸ್ಕ್ರೈಬ್ ಸಂಖ್ಯೆ ಏರಿಕೆ ಕಂಡಿದೆ. ಸದ್ಯ ಸಬ್ ಸ್ಕ್ರೈಬರ್ ಸಂಖ್ಯೆ 28 ಕೋಟಿ ತಲುಪಿದೆ. ಇದು ನೆಟ್ ಫ್ಲಿಕ್ಸ್ ಗೋಬಲ್ ಸಬ್ಸ್ಕ್ರೈಬರ್ ಸಂಖ್ಯೆಗೆ ಹತ್ತಿರದಲ್ಲಿದೆ.

Read more Articles on
click me!