ಅಮಿರ್ ಖಾನ್ ಅಭಿನಯ, ಅಮೀರ್ ಖಾನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿರುವ ಸೀತಾರೆ ಜಮೀನ್ ಪರ್ ಸಿನಿಮಾದ ಟ್ರೇಲರ್ ಲಾಂಚ್ ಆದ ಬೆನ್ನಲ್ಲೇ ಬಾಯ್ಕಾಟ್ ಅಭಿಯಾನ ಆರಂಭಗೊಂಡಿದೆ. ಇದೇ ರೀತಿ ಬಾಯ್ಕಾಟ್ ಅಭಿಯಾನದಿಂದ ಪ್ಲಾಪ್ ಆದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಅಮಿರ್‌ಗೆ ಇದೀಗ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.

ಮುಂಬೈ(ಮೇ.14) ಸುದೀರ್ಘ ದಿನಗಳ ಬಳಿಕ, ಭಾರಿ ಹಿನ್ನಡೆ ಬಳಿಕ ಬಾಲಿವುಡ್ ನಟ ಅಮೀರ್ ಖಾನ್ ಮತ್ತೆ ತೆರೆ ಮೇಲೆ ಮಿಂಚಲು ಬರುತ್ತಿದ್ದಾರೆ. ಅಮಿರ್ ಖಾನ್ ನಟನೆಯ, ಅಮಿರ್ ಖಾನ್ ಸಂಸ್ಥೆ ನಿರ್ಮಾಣ ಮಾಡಿರುವ ಸಿತಾರೆ ಜಮೀನ್ ಪರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಲೇ ಚಿತ್ರದ ಟ್ರೇಲರ್ ಲಾಂಚ್ ಆಗಿದೆ. ಆದರೆ ಟ್ರೇಲರ್ ಲಾಂಚ್ ಆದ ಕೆಲವೇ ಕ್ಷಣಗಳಲ್ಲಿ ಸಿತಾರೆ ಜಮೀನ್ ಪರ್ ಸಿನಿಮಾ ಬಾಯ್ಕಾಟ್ ಬಿಸಿ ಎದುರಿಸುತ್ತಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಸಿತಾರೆ ಜಮೀನ್ ಪರ ಸಿನಿಮಾ ಬಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ. ಈ ಅಭಿಯಾನ ಅಮೀರ್ ಖಾನ್ ಕಂಗಾಲಾಗುವಂತೆ ಮಾಡಿದೆ.

ಸಿತಾರೆ ಜಮೀನ್ ಪರ್ ಸಿನಿಮಾಗೆ ಬಹಿಷ್ಕಾರ ಯಾಕೆ?
2022ರ ಲಾಲ್ ಸಿಂಗ್ ಚಡ್ಡಾ  ಬಳಿಕ ಅಮಿರ್ ಖಾನ್ ಸಿನಿಮಾ ತೆರೆಗೆ ಬರುತ್ತಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಂಪೂರ್ಣ ಫ್ಲಾಪ್ ಆಗಿತ್ತು. ಇದು ಅಮಿರ್ ಖಾನ್‌ಗೆ ತೀವ್ರ ಹೊಡೆತ ನೀಡಿತ್ತು. ಇದೀಗ ಸಿತಾರೆ ಜಮೀನ್ ಪರ್ ಸಿನಿಮಾಗೆ ಬಹಿಷ್ಕಾರ ಎದುರಾಗಲು ಕಾರಣವೇನು ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿದೆ. ಕೆಲ ವರ್ಷಗಳ ಹಿಂದೆ ಅಮಿರ್ ಖಾನ್ ಟರ್ಕಿಯ ಮೊದಲ ಮಹಿಳಾ ಪ್ರಜೆಯನ್ನು ಭೇಟಿಯಾಗಿದ್ದರು. ಸಿನಿಮಾ ಶೂಟಿಂಗ್‌ಗಾಗಿ ಟರ್ಕಿ ತೆರಳಿದ್ದ ವೇಳೆ ಟರ್ಕಿಶ್ ಮೊದಲ ಮಹಿಳಾ ಪ್ರಜೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅಂದು ಇದು ವಿರೋಧಕ್ಕೆ ಕಾರಣವಾಗಿತ್ತು. ಯಾಕೆಂದರೆ ಟರ್ಕಿ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಹೊಂದಿದೆ ಅನ್ನೋ ಕಾರಣಕ್ಕಲ್ಲ. ಪಾಕಿಸ್ತಾನದ ಭಯೋತ್ಪಾದಕತೆಯನ್ನು ಟರ್ಕಿ ಬೆಂಬಲಿಸುತ್ತದೆ. ಆಪರೇಶನ್ ಸಿಂದೂರ್‌ಗೆ ಪ್ರತಿಯಾಗಿ ಪಾಕಿಸ್ತಾನ, ಭಾರತದ ಮೇಲೆ ನಡೆಸಿದ ದಾಳಿಗೆ ಟರ್ಕಿ ನೆರವು ನೀಡಿತ್ತು. ಟರ್ಕಿ ಡ್ರೋನ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನ-ಭಾರತದ ಮೇಲೆ ದಾಳಿ ಮಾಡಿತ್ತು. ಇಂತಹ ಟರ್ಕಿ ಸರ್ಕಾರದ ಭಾಗವಾಗಿರುವ ಮೊದಲ ಪ್ರಜೆಯನ್ನು ಅಮಿರ್ ಖಾನ್ ಭೇಟಿ ಮಾಡಿ ಮಾತುಕತೆ ನಡೆಸಿರುವುದೇ ಇದೀಗ ಸಿತಾರೆ ಜಮೀನ್ ಪರ್ ಬಹಿಷ್ಕಾರಕ್ಕೆ ಕಾರಣಾಗಿದೆ.

ನೆಗೆಟಿವ್‌ ಪಬ್ಲಿಸಿಟಿಯಿಂದಲೇ ದುಡ್ಡು ಮಾಡಿದ್ದ ಆಮಿರ್‌ ಖಾನ್;‌ ಅದೊಂದು ಸಿನಿಮಾ ಎಲ್ಲ ಉಲ್ಟಾ ಪಲ್ಟಾ ಮಾಡ್ತು!

ಸೋಶಿಯಲ್ ಮೀಡಿಯಾಗಳಲ್ಲಿ ಹಲವರು ಟರ್ಕಿ ದೇಶದ ಜೊತೆ ಕೈಜೋಡಿಸಿದ ಅಮಿರ್ ಖಾನ್ ಸಿನಿಮಾ ಬಹಿಷ್ಕರಿಸಿ ಎಂದು ಕರೆ ನೀಡಲಾಗಿದೆ. ಅಮಿರ್ ಖಾನ್ ಸಿನಿಮಾಗಳು ಇತ್ತೀಚೆಗೆ ಬಹಿಷ್ಕಾರದ ಬಿಸಿ ಎದುರಿಸುತ್ತಿದೆ. ಅಮಿರ್ ಖಾನ್ ಆಡಿದ ಮಾತು ಕೂಡ ಭಾರಿ ವಿವಾದ ಸೃಷ್ಟಿಸಿತ್ತು. ತನಗೂ ಹಾಗೂ ತನ್ನ ಕುಟುಂಬಕ್ಕೆ ಭಾರತದಲ್ಲಿ ಭದ್ರತೆ ಇಲ್ಲ. ಭಾರತದ ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಿದೆ ಎಂದಿದ್ದರು. ಈ ಮಾತುಗಳು ಅಮಿರ್ ಖಾನ್‌ಗೆ ಮುಳುವಾಗಿತ್ತು. ಅಮಿರ್ ಖಾನ್ ಸಿನಿಮಾ ಬಹಿಷ್ಕರಿಸುವ ಅಭಿಯಾನಗಳು ಆರಂಭಗೊಂಡಿತ್ತು. ಇದೀಗ ಪಾಕಿಸ್ತಾನಕ್ಕೆ ನೆರವು ನೀಡಿದ ಟರ್ಕಿ ಜೊತೆ ಮಾತುಕತೆ ನಡೆಸಿದ ಅಮಿರ್ ಖಾನ್ ಮೇಲೆ ಕೆಲ ನೆಟ್ಟಿಗರು ಗರಂ ಆಗಿದ್ದಾರೆ.

 

Scroll to load tweet…

 

2020ರಲ್ಲಿ ಅಮಿರ್ ಖಾನ್ ಟರ್ಕಿಶ್ ಮೊದಲ ಮಹಿಳಾ ಪ್ರಜೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಶೂಟಿಂಗ್ ಕಾರಣಕ್ಕಾಗಿ ಟರ್ಕಿಗೆ ತೆರಳಿದ್ದ ವೇಳೆ ಈ ಭೇಟಿ ಹಾಗೂ ಮಾತುಕತೆ ನಡೆದಿತ್ತು. ಆದರೆ ಟರ್ಕಿ ಇದೀಗ ಭಾರತದ ಮೇಲಿನ ದಾಳಿಗೆ ಪಾಕಿಸ್ತಾನಕ್ಕೆ ನೆರವು ನೀಡಿದ ಕಾರಣ ಹಳೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದು ಅಮಿರ್ ಖಾನ್ ಸಿನಿಮಾ ಮೇಲೆ ಪರಿಣಾಮ ಬೀರುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ  #BoycottSitaareZameenPar ಟ್ರೆಂಡ್ ಆಗುತ್ತಿದೆ. ಹಲವರು ಪೋಸ್ಟರ್, ಟ್ವೀಟ್ ಮೂಲಕ ಅಭಿಯಾನ ತೀವ್ರತೆ ಹೆ್ಚ್ಚಿಸಿದ್ದಾರೆ. 

ಗರ್ಲ್‌ಫ್ರೆಂಡ್ ಗೌರಿ ಕೈ ಹಿಡಿದು ಮೊದಲ ಬಾರಿಗೆ ಎಲ್ಲರೆದುರು ಬಂದ ಆಮೀರ್ ಖಾನ್!


 

Scroll to load tweet…