Virat Kohli: ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜರು ಮತ್ತು ಅಭಿಮಾನಿಗಳು ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ, ಕೊಹ್ಲಿ ಜನಪ್ರಿಯತೆ ಎಂತಹದ್ದು ಎಂಬುದನ್ನು ತೋರಿಸುತ್ತದೆ.
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಘೋಷಣೆ ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿತ್ತು. ಇಡೀ ಕ್ರಿಕೆಟ್ ಜಗತ್ತು ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರದಿಂದ ಬೇಸರ ವ್ಯಕ್ತಪಡಿಸಿತ್ತು. ಟೆಸ್ಟ್ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ನಿವೃತ್ತಿಯ ಮಾಹಿತಿಯನ್ನು ವಿರಾಟ್ ಕೊಹ್ಲಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು. ಇದೀಗ ವಿರಾಟ್ ಕೊಹ್ಲಿ ನಿವೃತ್ತಿ ಪೋಸ್ಟ್ ದಾಖಲೆಯನ್ನು ಬರೆದಿದೆ.
ವಿರಾಟ್ ಕೊಹ್ಲಿ ಅವರ ನಿವೃತ್ತಿ ಘೋಷಣೆಯ ಸೋಶಿಯಲ್ ಮೀಡಿಯಾ ಪೋಸ್ಟ್ ಅತ್ಯಧಿಕ ಲೈಕ್ಸ ಮತ್ತು ಕಮೆಂಟ್ಗಳನ್ನು ಪಡೆದುಕೊಂಡಿದೆ. ವಿಶ್ವದ ಕ್ರಿಕೆಟ್ ದಿಗ್ಗಜರು ಸೇರಿದಂತೆ ಸೆಲಿಬ್ರಿಟಿಗಳು ಕೊಹ್ಲಿಯ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಬಿಪಿ ನ್ಯೂಸ್ ವರದಿ ಪ್ರಕಾರ, ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆಯ ಪೋಸ್ಟ್ಗೆ 53 ಗಂಟೆಯಲ್ಲಿ 53 ಲಕ್ಷ (5.3 ಮಿಲಿಯನ್) ಲೈಕ್ಸ್ ಬಂದಿವೆ. ಸೆಲಿಬ್ರಿಟಿಗಳ ಜೊತೆಯಲ್ಲಿ ದೇಶ-ವಿದೇಶಗಳಲ್ಲಿರುವ ಅಭಿಮಾನಿಗಳು ಕೊಹ್ಲಿ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
ಪೋಸ್ಟ್ಗೆ ಬಂದ ಲೈಕ್ಸ್ ಸುರಿಮಳೆ ಗಮನಿಸಿದ್ರೆ ವಿರಾಟ್ ಕೊಹ್ಲಿ ಓರ್ವ ಕ್ರಿಕೆಟರ್ ಮಾತ್ರ ಕೋಟ್ಯಂತರ ಅಭಿಮಾನಿಗಳ ಹೃದಯ ಬಡಿತವಾಗಿದ್ದಾರೆ ಎಂದು ಅರ್ಥವಾಗುತ್ತದೆ. ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಬಗ್ಗೆ ಕ್ರಿಕೆಟ್ ಹಿರಿಯ ಆಟಗಾರರು ಮತ್ತು ವಿಶ್ಲೇಷಕರು ಪ್ರತಿಕ್ರಿಯಿಸಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ 271 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಅತ್ಯಧಿಕ ಫಾಲೋವರ್ಸ್ಗಳನ್ನು ಹೊಂದಿರುವ ಭಾರತದ ಕ್ರಿಕೆಟ್ ಆಟಗಾರನಾಗಿದ್ದಾರೆ.
ಇದುವರೆಗೂ ವಿರಾಟ್ ಕೊಹ್ಲಿ 1,030 ಪೋಸ್ಟ್ ಮಾಡಿದ್ದು, 277 ಜನರ ಖಾತೆಗಳನ್ನು ಫಾಲೋ ಮಾಡಿದ್ದಾರೆ. ವಿರಾಟ್ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಸೆಲೆಬ್ರಿಟಿಗಿಂತ ಕಡಿಮೆಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಈವರೆಗೆ 123 ಟೆಸ್ಟ್ ಪಂದ್ಯಗಳನ್ನಾಡಿ 9,230 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ.
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಅದ್ಭುತ ಪ್ರದರ್ಶನ ಮಾಡಿದ್ದಾರೆ. ಕೊಹ್ಲಿ ಅವರ ಪ್ರಯಾಣವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ.ಟೆಸ್ಟ್ ಕ್ರಿಕೆಟ್ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಹೇಳುವುದು ಅಷ್ಟೇ ಭಾವನಾತ್ಮಕವೂ ಹೌದು, ಸ್ಪೂರ್ತಿದಾಯಕವೂ ಹೌದು. ಅವರ ಒಂದು ಪೋಸ್ಟ್ಗೆ ಅವರು ಇಷ್ಟು ಬೇಗ ಪಡೆದ ಲೈಕ್ಗಳ ಸಂಖ್ಯೆ ಅವರ ಅಭಿಮಾನಿಗಳು ಅವರ ನಿರ್ಧಾರವನ್ನು ಪೂರ್ಣ ಹೃದಯದಿಂದ ಸ್ವೀಕರಿಸುತ್ತಿದ್ದಾರೆ ಮತ್ತು ಯಾವಾಗಲೂ ಅವರೊಂದಿಗೆ ಇದ್ದಾರೆ ಎಂಬುದನ್ನು ತೋರಿಸುತ್ತದೆ.
3 ದಿಗ್ಗಜರ ವೃತ್ತಿಬದುಕಿಗೆ ಮುಳ್ಳಾದ 2 ಟೆಸ್ಟ್ ಸರಣಿ!
ಕಳೆದ 6 ತಿಂಗಳ ಅವಧಿಯಲ್ಲಿ ಭಾರತ ತಂಡದ ಮೂವರು ದಿಗ್ಗಜ ಕ್ರಿಕೆಟಿಗರು ನಿವೃತ್ತಿ ಪ್ರಕಟಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಟೆಸ್ಟ್ನಿಂದ ನಿವೃತ್ತಿಯಾಗಿದ್ದರೆ, ಆರ್.ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಮೂವರ ವೃತ್ತಿ ಬದುಕಿಗೂ ತಿರುವು ನೀಡಿದ್ದು ಕಳೆದ ವರ್ಷಾಂತ್ಯದಲ್ಲಿ ನಡೆದ 2 ಟೆಸ್ಟ್ ಸರಣಿ. ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ತವರಿನಲ್ಲಿ ಕ್ಲೀನ್ಸ್ವೀಪ್ ಮುಖಭಂಗಕ್ಕೊಳಗಾದ ಕೊಹ್ಲಿ, ರೋಹಿತ್ ತಮ್ಮ ಕಳಪೆ ಆಟದಿಂದ ಟೀಕೆಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಇವರಿಬ್ಬರು ಮಿಂಚಲಿಲ್ಲ. ಕೊಹ್ಲಿ ಒಂದು ಶತಕ ಬಾರಿಸಿದ್ದರೂ ಇತರ ಪಂದ್ಯಗಳಲ್ಲಿ ವಿಫಲರಾಗಿದ್ದರು. ಇನ್ನು, ಅಶ್ವಿನ್ ಆಸ್ಟ್ರೇಲಿಯಾ ಸರಣಿ ನಡುವೆಯೇ ವಿದಾಯ ಪ್ರಕಟಿಸಿ ತವರಿಗೆ ಮರಳಿದ್ದರು.