Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • KEA 2025
  • Home
  • Entertainment
  • Cine World
  • ಅಲ್ಲು ಅರ್ಜುನ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಮಾಡಲಿದ್ದಾರೆ ದೀಪಿಕಾ: ನಿರ್ದೇಶಕ ಅಟ್ಲೀ ಹೇಳಿದ ರಹಸ್ಯವೇನು?

ಅಲ್ಲು ಅರ್ಜುನ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಮಾಡಲಿದ್ದಾರೆ ದೀಪಿಕಾ: ನಿರ್ದೇಶಕ ಅಟ್ಲೀ ಹೇಳಿದ ರಹಸ್ಯವೇನು?

ಕಳೆದ ಕೆಲವು ದಿನಗಳಿಂದ ತನ್ನ ಷರತ್ತುಗಳ ಮೂಲಕ ಸುದ್ದಿಯಲ್ಲಿದ್ದ ದೀಪಿಕಾ ಪಡುಕೋಣೆ ಇದೀಗ ಪವರ್‌ಫುಲ್‌ ಪಾತ್ರದೊಂದಿಗೆ ರೀ ಎಂಟ್ರಿಕೊಟ್ಟಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

Govindaraj S | Published : Jun 09 2025, 06:07 PM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
15
Asianet Image
Image Credit : Asianet News

ಬಹುಕೋಟಿ ಬಜೆಟ್‌ನಲ್ಲಿ ಹೊರಬರುತ್ತಿರುವ ಅಲ್ಲು ಅರ್ಜುನ್‌ ಹಾಗೂ ಅಟ್ಲೀ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿರುವುದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ಕಂಪ್ಲೀಟ್‌ ಆ್ಯಕ್ಷನ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಅವರ ಪಾತ್ರದ ಗ್ಲಿಂಪ್ಸ್‌ ಅನ್ನು ಬಿಡುಗಡೆ ಮಾಡಲಾಗಿದೆ.

25
Asianet Image
Image Credit : Asianet News

‘ರಾಣಿ ಸಾಮ್ರಾಜ್ಯ ವಿಸ್ತರಣೆಗೆ ಹೊರಟಿದ್ದಾಳೆ’ ಎಂಬ ಶೀರ್ಷಿಕೆಯೊಂದಿಗೆ ದೀಪಿಕಾ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ. ಇದರಲ್ಲಿ ಯುದ್ಧದಲ್ಲಿ ಪಾಲ್ಗೊಳ್ಳುವ, ಶತ್ರುಗಳನ್ನು ಸದೆಬಡಿಯುವ ಪವರ್‌ಫುಲ್‌ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್‌ ಹಾಗೂ ಅಟ್ಲೀ ಜೊತೆಗೆ ದೀಪಿಕಾ ನಟಿಸುತ್ತಿರುವ ಮೊದಲ ಸಿನಿಮಾವಿದು.

Related Articles

ಸಂಭಾವನೆ ವಿವಾದದ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಮತ್ತೊಂದು ಶಾಕ್‌? ಏನಿದು ಹೊಸ ವಿಷ್ಯ!
ಸಂಭಾವನೆ ವಿವಾದದ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಮತ್ತೊಂದು ಶಾಕ್‌? ಏನಿದು ಹೊಸ ವಿಷ್ಯ!
ಸುದೀಪ್‌ ರೆಡ್ಡಿ ವಂಗಾ ಸ್ಪಿರಿಟ್‌ ಟೀಮ್‌ನಿಂದ ದೀಪಿಕಾ ಪಡುಕೋಣೆ ಔಟ್‌: ಕಾರಣವೇನು ಗೊತ್ತಾ?
ಸುದೀಪ್‌ ರೆಡ್ಡಿ ವಂಗಾ ಸ್ಪಿರಿಟ್‌ ಟೀಮ್‌ನಿಂದ ದೀಪಿಕಾ ಪಡುಕೋಣೆ ಔಟ್‌: ಕಾರಣವೇನು ಗೊತ್ತಾ?
35
Asianet Image
Image Credit : Asianet News

ಕಳೆದ ಕೆಲವು ದಿನಗಳಿಂದ ತನ್ನ ಷರತ್ತುಗಳ ಮೂಲಕ ಸುದ್ದಿಯಲ್ಲಿದ್ದ ದೀಪಿಕಾ ಇದೀಗ ಪವರ್‌ಫುಲ್‌ ಪಾತ್ರದೊಂದಿಗೆ ರೀ ಎಂಟ್ರಿಕೊಟ್ಟಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ದೀಪಿಕಾ ಷರತ್ತುಗಳಿಗೆ ಒಪ್ಪಿ ದುಬಾರಿ ಸಂಭಾವನೆಯನ್ನೂ ನೀಡಿ ಚಿತ್ರತಂಡ ಸ್ಟಾರ್‌ನಟಿಯನ್ನು ಮತ್ತೆ ಅಖಾಡಕ್ಕಿಳಿಸಿದೆ ಎನ್ನಲಾಗಿದೆ.

45
Asianet Image
Image Credit : Asianet News

ಸನ್ ಪಿಕ್ಚರ್ಸ್ ನಿರ್ಮಾಣ ಬ್ಯಾನರ್‌ನಿಂದ ಬೆಂಬಲಿತವಾದ ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'AA22 x A6' ಎಂದು ಹೆಸರಿಡಲಾಗಿದ್ದು, ಇದೊಂದು ದೊಡ್ಡ ಸಿನಿಮಾ ಎಂದೇ ಬಿಂಬಿಸಲಾಗಿದೆ. ಸದ್ಯ ಹೆಸರಿಡದ ಈ ಚಿತ್ರವನ್ನು ಏಪ್ರಿಲ್‌ನಲ್ಲಿ ನಟ ಅಲ್ಲು ಅರ್ಜುನ್ ಅವರ 43ನೇ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಿಸಲಾಯಿತು.

55
Asianet Image
Image Credit : Asianet News

2023ರ ಬ್ಲಾಕ್‌ಬಸ್ಟರ್ ಚಿತ್ರ 'ಜವಾನ್' ನಂತರ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಅಟ್ಲೀ ಮತ್ತೆ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದಿಂದ ಹೊರನಡೆದ ಬಳಿಕ ಅಟ್ಲೀ ಜೊತೆಗೆ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

Govindaraj S
About the Author
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು. Read More...
ದೀಪಿಕಾ ಪಡುಕೋಣೆ
ಅಲ್ಲು ಅರ್ಜುನ್
ಮನರಂಜನಾ ಸುದ್ದಿ
 
Recommended Stories
Top Stories