ಎದ್ದ ತಕ್ಷಣ ಮೊಬೈಲ್ ನೋಡ್ತೀರಾ? ಇಂದೇ ಈ ಅಭ್ಯಾಸ ಬಿಟ್ಟುಬಿಡಿ!
ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ಈ ಪೋಸ್ಟ್ ನಲ್ಲಿ ನೋಡೋಣ.
- FB
- TW
- Linkdin
Follow Us
)
ಎದ್ದ ತಕ್ಷಣ ಮೊಬೈಲ್ ನೋಡ್ತೀರಾ? ಸಮಸ್ಯೆ ಖಚಿತ!
ನಮ್ಮಲ್ಲಿ ಹಲವರಿಗೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವ ಅಭ್ಯಾಸ ಇದೆ. ಅಲಾರಾಂ ಆಫ್ ಮಾಡಿದ ಮೇಲೆ ಮೆಸೇಜ್, ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡೋದು ಅಥವಾ ನ್ಯೂಸ್ ನೋಡೋದು ಮಾಮೂಲಿ. ಆದರೆ ಈ ಅಭ್ಯಾಸ ನಿಮಗೆ ಊಹೆಗೂ ಮೀರಿದಷ್ಟು ಹಾನಿ ಮಾಡಬಹುದು.
ಎದ್ದ ತಕ್ಷಣ ಫೋನ್ ಬಳಸಬಾರದೇಕೆ?
ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಿದರೆ ದಿನವಿಡೀ ನಮ್ಮ ಕೆಲಸದ ಸಾಮರ್ಥ್ಯ ಕಡಿಮೆಯಾಗುತ್ತದೆ. ಮನಸ್ಸಿಗೆ ಬೇಕಾದ ಶಾಂತಿ ಸಿಗುವ ಬದಲು ಹೆಚ್ಚಿನ ಮಾಹಿತಿ ತುಂಬಿಕೊಳ್ಳುತ್ತೀರಿ. ಈಗ ಎದ್ದ ತಕ್ಷಣ ಮೊಬೈಲ್ ಯಾಕೆ ನೋಡಬಾರದು ಅಂತಾ ಕಾರಣಗಳನ್ನು ನೋಡೋಣ.
ಮಾನಸಿಕ ಆರೋಗ್ಯ ಹಾಳಾಗುತ್ತದೆ:
ಎದ್ದ ತಕ್ಷಣ ಸೋಶಿಯಲ್ ಮೀಡಿಯಾ, ಮೆಸೇಜ್ ನೋಡುವುದರಿಂದ ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳು ಉಂಟಾಗಬಹುದು.
ಮಾನಸಿಕ ಸಾಮರ್ಥ್ಯ ಕುಂಠಿತ:
ಬೆಳಗ್ಗೆ ಎದ್ದ ತಕ್ಷಣ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ತುಂಬುವುದು ಮುಖ್ಯ. ಆದರೆ ಮೊಬೈಲ್ ನೋಡುವುದರಿಂದ ದಿನದ ಯೋಜನೆ ಸರಿಯಾಗಿ ಮಾಡಲು ಆಗುವುದಿಲ್ಲ.
ಪ್ರತಿಕ್ರಿಯಾಶೀಲರನ್ನಾಗಿ ಮಾಡುತ್ತದೆ:
ಎದ್ದ ತಕ್ಷಣ ಕೆಲಸ ಮಾಡುವ ಬದಲು ಮೊಬೈಲ್ ನೋಡಿದರೆ, ಅದು ನಮ್ಮನ್ನು ಪ್ರತಿಕ್ರಿಯಾಶೀಲರನ್ನಾಗಿ ಮಾಡುತ್ತದೆ. ಇದರಿಂದ ದಿನವಿಡೀ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ.
ಫೋನ್ ಗೆ ಗುಲಾಮರು:
ಎದ್ದ ತಕ್ಷಣ ಫೋನ್ ನೋಡುವುದು ಫೋನ್ ಚಟಕ್ಕೆ ದಾರಿ ಮಾಡಿಕೊಡುತ್ತದೆ. ಆರೋಗ್ಯ ಹಾಳಾಗುತ್ತದೆ. ಈ ಅಭ್ಯಾಸವನ್ನು ನಿಯಂತ್ರಿಸಬೇಕು.
ಈ ಅಭ್ಯಾಸ ಬಿಡುವುದು ಹೇಗೆ?
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬೆಳಗ್ಗೆ ಯೋಗ, ಧ್ಯಾನ ಅಥವಾ ವ್ಯಾಯಾಮ ಮಾಡಿ. ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಮೊಬೈಲ್ ನೋಡುವ ಅಭ್ಯಾಸ ಬಿಡಬಹುದು. ಈ ಅಭ್ಯಾಸವಿದ್ದರೆ ಬದಲಾಯಿಸಿ, ಬೆಳಗನ್ನು ಉಪಯುಕ್ತವಾಗಿಸಿ. ದಿನವಿಡೀ ಚಟುವಟಿಕೆಯಿಂದ ಇರುತ್ತೀರಿ.