ಕರ್ನಾಟಕದ ಟಾಪ್ 5 ಶ್ರೀಮಂತ ಜಿಲ್ಲೆಗಳು ಯಾವುವು ಹೇಳಬಲ್ಲಿರಾ?
ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳಿವೆ. ಈ 31 ಜಿಲ್ಲೆಗಳಲ್ಲಿ ಯಾವ ಜಿಲ್ಲೆ ಅತ್ಯಂತ ಶ್ರೀಮಂತ ಜಿಲ್ಲೆ ಅನ್ನೋದು ನಿಮಗೆ ತಿಳಿದಿದ್ಯಾ? ಇಲ್ಲಿದೆ ನೋಡಿ ಕರ್ನಾಟಕದ ಟಾಪ್ 5 ಶ್ರೀಮಂತ ಜಿಲ್ಲೆಗಳು.
- FB
- TW
- Linkdin
Follow Us
)
ಕರ್ನಾಟದಲ್ಲಿ (Karnataka) ಒಟ್ಟು 31 ಜಿಲ್ಲೆಗಳಿವೆ. ಈ ಎಲ್ಲಾ ಜಿಲ್ಲೆಗಳ ಆಚರಣೆ, ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿದೆ. ಅಷ್ಟೇ ಅಲ್ಲ ಅಲ್ಲಿನ ಜನರ ಸಾಕ್ಷರತೆ, ಆರ್ಥಿಕತೆ ಎಲ್ಲವೂ ವಿಭಿನ್ನವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಉದ್ಯೋಗವನ್ನು ಆಧಾರಿಸಿ, ಅಲ್ಲಿನ ಒಟ್ಟು ಆರ್ಥಿಕತೆಯ ಆಧಾರದ ಮೇಲೆ ಯಾವ ಜಿಲ್ಲೆಗಳು ಕರ್ನಾಟಕ ಟಾಪ್ 5 ಶ್ರೀಮಂತ ಜಿಲ್ಲೆಗಳು ಅನ್ನೋದನ್ನು ನೋಡೋಣ.
ಬೆಂಗಳೂರು ನಗರದ ಐಟಿ ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳಿಂದ ಹಿಡಿದು ಚಿಕ್ಕಮಗಳೂರಿನ ಕಾಫಿ ಕೃಷಿ ಮತ್ತು ಪ್ರವಾಸೋದ್ಯಮದವರೆಗೆ - ಇವು ಕರ್ನಾಟಕದ ಆರ್ಥಿಕ ಶಕ್ತಿಯನ್ನು (financial power) ಪ್ರತಿಬಿಂಬಿಸುತ್ತವೆ. ಅಷ್ಟೇ ಅಲ್ಲ, ದಕ್ಷಿಣ ಕನ್ನಡ ಮತ್ತು ಉಡುಪಿ ತೈಲ ಸಂಶೋಧನೆ, ಶಿಕ್ಷಣ ಮತ್ತು ಆತಿಥ್ಯ ಉದ್ಯಮದ ಮೂಲಕ ಬೆಳೆಯುತ್ತಿದ್ದರೆ, ಬೆಂಗಳೂರು ಗ್ರಾಮೀಣ ಪ್ರದೇಶವು ಕೃಷಿ ಮತ್ತು ಕೈಗಾರಿಕೆಗಳ ಮೂಲಕ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ.
ಬೆಂಗಳೂರು ಗ್ರಾಮೀಣ (Bengaluru Urban):
ಬೆಂಗಳೂರು ಗ್ರಾಮೀಣ ಐದನೇ ಶ್ರೀಮಂತ ಜಿಲ್ಲೆಯಾಗಿದೆ. ಇದನ್ನು ಸಿಲ್ಕ್ ಸಿಟಿ ಅಂತಾನೂ ಕರಿತಾರೆ. ಈ ಪ್ರದೇಶವು ಕೃಷಿ ಮತ್ತು ಕೈಗಾರಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದೆ. ಇದರಿಂದಾಗಿ ಈ ಜಿಲ್ಲೆ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ. ಈ ಜಿಲ್ಲೆಯ ತಲಾ ಆದಾಯ 4.45 ಲಕ್ಷ ಆಗಿದೆ.
ಚಿಕ್ಕಮಗಳೂರು (Chikkamagaluru) :
ಪ್ರಕೃತಿ ಸೌಂದರ್ಯದಿಂದ ಕೂಡಿದ ಚಿಕ್ಕಮಗಳೂರು ರಾಜ್ಯದ ನಾಲ್ಕನೇ ಶ್ರೀಮಂತ ಜಿಲ್ಲೆಯಾಗಿದೆ. ಇದನ್ನು ಕರ್ನಾಟಕದ ಕಾಫಿ ರಾಜಧಾನಿ ಅಂತಾನೂ ಕರೆಯುತ್ತಾರೆ. ಈ ತಾಣವು ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಬೆಡ್ಡಗುಡ್ಡಗಳಿಂದ ಆವೃತವಾಗಿರುವ, ಸುಂದರವಾದ ಹವಾಮಾನವನ್ನು ಹೊಂದಿರುವ ಈ ತಾಣಕ್ಕೆ ದೇಶದ ಮೂಲೆ ಮೂಲೆಯಿಂದ ಪ್ರವಾಸಕ್ಕೆ ಬರುತ್ತಾರೆ. ಚಿಕ್ಕಮಗಳೂರಿನ ತಲಾ ಆದಾಯ (Per Capita Income) 4.69 ಲಕ್ಷ ಆಗಿದೆ.
ಉಡುಪಿ (Udupi) :
ಕರ್ನಾಟಕ ಶ್ರೀಮಂತ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ ಮೂರನೇ ಸ್ಥಾನದಲ್ಲಿದೆ. ಉಡುಪಿಯನ್ನು ಟೆಂಪಲ್ ಟೌನ್ ಅಥವಾ ದೇವಾಲಯಗಳ ನಗರಿ ಎಂದು ಕರೆಯುತ್ತಾರೆ. ಈ ಜಿಲ್ಲೆ ಸುಂದರವಾದ ಬೀಚ್, ಆಹಾರಗಳಿಗೂ ಹೆಸರುವಾಸಿಯಾಗಿದೆ. ಉಡುಪಿಯ ತಲಾ ಆದಾಯ 4.84 ಲಕ್ಷ ಆಗಿದೆ.
ದಕ್ಷಿಣ ಕನ್ನಡ (Dakshina Kannada)
ಬುದ್ದಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆ ಶ್ರೀಮಂತ ಜಿಲ್ಲೆಗಳ ಲಿಸ್ಟ್ ನಲ್ಲಿ 2ನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಬ್ಯಾಂಕ್ ಗಳ ಜನ್ಮಭೂಮಿ ಹೌದು, ಅಷ್ಟೇ ಅಲ್ಲ ಎಜುಕೇಶನ್ ಹಬ್ ಕೂಡ ಹೌದು. ದಕ್ಷಿಣ ಕನ್ನಡದ ತಲಾ ಆದಾಯ 4.92 ಲಕ್ಷ.
ಬೆಂಗಳೂರು ನಗರ (Bengaluru Rural)
ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿದೆ. ಇದು ಲಕ್ಷಾಂತರ ಐಟಿ ಕಂಪನಿಗಳಿಗೆ ನೆಲೆಯಾದ ನಗರ. ಸಿಲಿಕಾನ್ ಸಿಟಿಯಲ್ಲಿ ಸಾವಿರಾರು ವಾಣಿಜ್ಯ ಕಂಪನಿಗಳು ಸಹ ಇವೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳಿಗೂ ಬೆಂಗಳೂರು ನೆಲೆ ನೀಡಿದೆ. ಬೆಂಗಳೂರು ನಗರನ ತಲಾ ಆದಾಯ 6.21 ಲಕ್ಷ.